ಧಾರವಾಡದಲ್ಲಿ ಲೋಕಾಯುಕ್ತ ರೇಡ್- ವಾಟರ್ ಪಾರ್ಕ್ ಸೇರಿ ಹಲವು ಆಸ್ತಿಗಳ ಇರುವಿಕೆ ಪತ್ತೆ…!? “ಜಾಗೃತ ಕೋಶ”…!!!
ಧಾರವಾಡ: ಚುಮು ಚುಮು ಬೆಳಗಿನಲ್ಲಿ ಮೈ ನಡುಗುವ ಚಳಿಯಲ್ಲಿ ಅಧಿಕಾರಿಯ ನಿವಾಸದ ಮನೆ ಮುಂದೆ ನಿಂತ ಲೋಕಾಯುಕ್ತರು, ರೇಡ್ ಮೂಲಕ ಬಿಸಿಯನ್ನುಂಟು ಮಾಡಿದ ಘಟನೆ ಧಾರವಾಡದ ಕೆಲಗೇರಿಯ ಸಿಲ್ವರ್ ಅರ್ಚಡ್‌ನಲ್ಲಿ ನಡೆದಿದೆ.
ಬೆಳಗಾವಿ ಕೃಷಿ ಇಲಾಖೆಯ ಸಚಿವಾಲಯ ವಿಭಾಗದ ಜಾಗೃತಕೋಶದ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಈರಪ್ಪ ಬಿಜಾಪುರ ಅವರ ಧಾರವಾಡದ ಕೆಲಗೇರಿ ರಸ್ತೆಯ ಮನೆ ನಂ: 45/79/3, ಅಂಜನಾದ್ರಿ ಬಿಲ್ಡಿಂಗ್, 3ನೇ ಅಡ್ಡರಸ್ತೆ, ಸಿಲ್ವರ್ ಅರ್ಚಡ್ ಮೇಲೆ ದಾಳಿ ನಡೆದಿದೆ.
ಅಧಿಕಾರಿಗೆ ಸಂಬಂಧಿಸಿದಂತೆ ವಾಟರ್ ಪಾರ್ಕ್ ಇರುವುದು ಪತ್ತೆಯಾಗಿದೆಯಂತೆ. ಇನ್ನುಳಿದಂತೆ ಅಪಾರ್ಟ್‌ಮೆಂಟ್, ಮೂರು ಎಕರೆ ಜಮೀನು ಸೇರಿದಂತೆ ಹಲವು ಮಾಹಿತಿಯ ದಾಖಲೆಗಳು ಲಭ್ಯವಾಗಿವೆಯಂತೆ.
