ಹುಬ್ಬಳ್ಳಿ: 3ನೇ ಮಾಲಾಧಾರಿ ಸಾವು- ದೇವರು ಫಲ ಕೊಟ್ಟರೇ ‘ಐವರು’ ಉಳಿಯಬಹುದು- ಕಿಮ್ಸ್ ನಿರ್ದೇಶಕ
ಹುಬ್ಬಳ್ಳಿ: ಉಣಕಲ್ನ ಅಚ್ಚವ್ವನ ಕಾಲನಿಯಲ್ಲಿ ನಡೆದ ಸಿಲಿಂಡರ್ ಸ್ಪೋಟ್ ಪ್ರಕರಣದಲ್ಲಿ ಗಾಯಗೊಂಡ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಪೈಕಿ ಮತ್ತೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ರಾಜು ಹರ್ಲಾಪುರ ಎಂಬ 21 ವಯಸ್ಸಿನ ಯುವಕನೇ ಸಾವಿಗೀಡಾಗಿದ್ದು, ಉಳಿದ ಐವರ ಸ್ಥಿತಿಯೂ ಗಂಭೀರವಾಗಿದೆ. ಈ ಕುರಿತು ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಂಬಾರ ಹೇಳಿದ್ದು ಇಲ್ಲಿದೆ ನೋಡಿ…
ಘಟನೆಯಲ್ಲಿ ಒಟ್ಟು ಒಂಬತ್ತು ಮಾಲಾಧಾರಿಗಳು ಗಾಯಗೊಂಡಿದ್ದರು. ಈ ಪೈಕಿ ಮೂವರು ಸಾವಿಗೀಡಾಗಿದ್ದಾರೆ. ಮರಣ ಹೊಂದಿದವರಿಗೆ ಸರಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
